ರಾಣಿಗಂಜ್
ಪಶ್ಚಿಮ ಬಂಗಾಲದ ಬದ್ರ್ವಾನ್ ಜಿಲ್ಲೆಯ ಒಂದು ಪಟ್ಟಣ.  ದಾಮೋದರ ನದಿಯ ಉತ್ತರ ದಡದಲ್ಲಿ ಕಲ್ಕತ್ತ ನಗರದ ವಾಯುವ್ಯಕ್ಕೆ ಸು.  168 ಕಿಮೀ ದೂರದಲ್ಲಿವೆ.  1961 ರಲ್ಲಿ ಇದರ ಪ್ರತಿ ಚ.ಕಿ.ಮೀನಲ್ಲಿ ಇದ್ದ ಜನಸಾಂದ್ರತೆ 1088.  ಪಟ್ಟಣದ ಸುತ್ತ ಮುತ್ತ ಇರುವ ಕಲ್ಲಿದ್ದಲು ಗಣಿಗಳಿಂದ ಈ ಪ್ರದೇಶ ಪ್ರಸಿದ್ಧವಾಯಿತು.  ಇಲ್ಲಿ ಉತ್ತಮವಾದ ಕಲ್ಲಿದ್ದಲು ಹೇರಳವಾಗಿ ದೊರಕುವುದರಿಂದಲೇ ದುರ್ಗಾಪುರ, ಅಸನ್‍ಸಾಲ್ ನಗರಗಳು ಬೆಳೆಯಲು ಕಾರಣವಾಯಿತು.  ದುರ್ಗಾಪುರ ಕೈಗಾರಿಕಾ ನಗರವಾಗಿ ಪ್ರಸಿದ್ಧವಾಗಲು ರಾಣಿಗಂಜ್‍ನ ಕಲ್ಲಿದ್ದಲು ಗಣಿಗಳೇ ಕಾರಣವಾಗಿವೆ.  ಕಲ್ಲಿದ್ದಲಿನ ಜೊತೆಗೆ ಕೆಲವೆಡೆ ಇಲ್ಲಿ ಕಬ್ಬಿಣದ ಅದಿರೂ ದೊರಕುತ್ತದೆ.

ರಾಣಿಗಂಜ್ ಪ್ರದೇಶದ ಶಿಲಾಸ್ತೋಮ ಭೂವೈe್ಞÁನಿಕ ಮಹತ್ತ್ವವನ್ನು ಪಡೆದಿದೆ.  ಕೆಳಗಣ ಗೊಂಡ್ವಾನ ಬೃಹತ್ ಸೇರಿದ ಉತ್ತಮ ದರ್ಜೆಯ ಕಲ್ಲಿದ್ದಲು ಸ್ತರಗಳನ್ನು ಹೊಂದಿರುವ ರಾಣಿಗಂಜ್ ಶಿಲಾಶ್ರೇಣಿ, ಪರ್ಮಿಯನ್ ಕಾಲದ  ಪ್ರರೋಪ ಪ್ರದೇಶವಾಗಿದೆ.  ಈ ಶಿಲಾಶ್ರೇಣಿ ಪ್ರದೇಶವನ್ನು ಪರ್ಮಿಯನ್ ಕಾಲದ ಬರಕಾರ್ ನದಿ  ಅಡ್ಡಹಾಯ್ದಿದೆ.  ಗಣಿಯ ಕಾರ್ಯಾಚರಣೆ 1500 ಚಕಿಮೀ ವಿಸ್ತೀರ್ಣಕ್ಕೆ ವ್ಯಾಪಿಸಿದೆ.  ಇಲ್ಲಿಯ ಕಲ್ಲಿದಲು ನಿಕ್ಷೇಪದ ಟನ್ನುಗಳೆಂದು ಅಂದಾಜು ಮಾಡಲಾಗಿದೆ.  ಈ ಪ್ರದೇಶದ ದಕ್ಷಿಣ ಮತ್ತು ಪಶ್ಚಿಮದ ಅಂಚುಗಳಲ್ಲಿ ಜುರಾಸಿಕ್ ಯುಗದ ಸ್ತರಭಂಗಗಳಿದ್ದು, ಹಲವಾರು ಡಾಲರೈಟ್ ಶಿಲಾ ಒಡ್ಡುಗಳು ಹಾದುಹೋಗಿವೆ.  ಈ ಶ್ರೇಣಿಯ ಮೇಲಣ ಸ್ತರಗಳಲ್ಲಿ ಡಡಾಕ್ಸೈಲಾನ್ ಎಂಬ ಮರಶಿಲಾ ಸಸ್ಯವಶೇಷಗಳು ಕಾಣಸಿಗುತ್ತವೆ.  ಝರಿಯಾ, ಮೋಟರು ಹಾಗೂ ಸಾತ್ಪುರದ ಬಿಜೋರಿ ಮತ್ತು ನಾಗಪುರದ ಕಾಮ್ತಿ ಪದರಗಳೂ ಮಹಾನದಿ ಕಣಿವೆಯ ಹಿಮಗಿರ್ ಪದರಗಳೂ ಪಚ್ಮಾರಿ ಬೆಟ್ಟಗಳಲ್ಲಿರುವ ಆಮಂಡ್ ಶಿಲಾಪದರಗಳೂ ಹಾಗೂ ಗೋದಾವರಿ ನದೀಕಣಿವೆಯಲ್ಲಿ ಕಂಡುಬರುವ ಚಿಂತಲ್ಪುಡಿ ಮರಳುಶಿಲೆಗಳೂ ರಾಣಿಗಂಜ್ ಶಿಲಾಶ್ರೇಣಿಗೆ ಸಮಕಾಲೀನವಾದುವು ಎನ್ನಲಾಗಿದೆ.  ಈ ಶಿಲೆಗಳಲ್ಲೂ ರಾಣಿಗಂಜ್ ಶಿಲಾಶ್ರೇಣಿಯಲ್ಲಿರುವಂಥ ಪರ್ಮಿಯನ್ ಯುಗದ ಸಸ್ಯವಶೇಷಗಳು  ಹೇರಳವಾಗಿ ಕಾಣಸಿಗುತ್ತವೆ.  (ನೋಡಿ- ಗೋಂಡ್ವಾನ-ವ್ಯವಸ್ಥೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ